ಡಿಸೆಂಬರ್ ೬ - ಡಿಸೆಂಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೦ನೇ (ಅಧಿಕ ವರ್ಷದಲ್ಲಿ ೩೪೧ನೇ) ದಿನ. ಈ ದಿನದ ನಂತರ, ವರ್ಷದಲ್ಲಿ, ೨೫ ದಿನಗಳು ಉಳಿದಿರುತ್ತವೆ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೨೪೦ - ಬಾಟು ಖಾನ್ನ ನೇತೃತ್ವದ ಮಂಗೋಲರು ಕಿಯೇವ್ ನಗರವನ್ನು ವಶಪಡಿಸಿಕೊಂಡರು. ೧೫೩೪ - ಎಕ್ವಡಾರ್ನ ರಾಜಧಾನಿ ಕ್ವಿಟೊ ನಗರದ ಸ್ಥಾಪನೆ. ೧೭೬೮ - ಎನ್ಸೈಕ್ಲೊಪೀಡಿಯ ಬ್ರಿಟಾನಿಕ ವಿಶ್ವಕೋಶದ ಮೊದಲ ಆವೃತ್ತಿ ಪ್ರಕಟಣೆ. ೧೮೬೫ - ಅಮೇರಿಕ ದೇಶದಲ್ಲಿ ಗುಲಾಮಗಿರಿಯನ ನಿಷೇಧ ಮಾಡುವ ಸಂವಿಧಾನಿಕ ತಿದ್ದುಪಡಿ ಜಾರಿಗೆ. ೧೯೧೭ - ಫಿನ್‍ಲ್ಯಾಂಡ್ ರಷ್ಯಾದಿಂದ ಸ್ವಾತಂತ್ರ್ಯ ಘೋಷಣೆ. ೧೯೯೨ - ಹಿಂದೂ ಕರಸೇವಕರು ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಕೆಡವಿದರು. == ಜನನ == ೧೮೨೩ - ಮ್ಯಾಕ್ಸ್ ಮ್ಯೂಲರ್, ಜರ್ಮನಿಯ ಪೂರ್ವ ಏಷ್ಯಾದ ಅಧ್ಯಯನಕಾರ. ೧೮೩೫ - ವಿಲ್‌ಹೆಲ್ಮ್ ರೂಡಾಲ್ಫ಼್ ಫ಼ಿಡಿಗ್, ಜರ್ಮನಿಯ ರಸಾಯನ ವಿಜ್ಞಾನಿ ೧೭೩೨ - ವಾರನ್ ಹೇಸ್ಟಿನ್ಗ್‌ಸ಼್, ಭಾರತದ ಮೊದಲ ಗವರ್ನರ್-ಜನರಲ್ == ನಿಧನ == ೧೯೫೬ - ಭಾರತದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ == ದಿನಾಚರಣೆಗಳು == ಫಿನ್‍ಲ್ಯಾಂಡ್ - ಸ್ವಾತಂತ್ರ್ಯ ದಿನಾಚರಣೆ. ಸ್ಪೇನ್ - ಸಂವಿಧಾನ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ